ಸಾಮಾನ್ಯವಾಗಿ ಎರಡು ರೀತಿಯ ಜನರಿರುತ್ತಾರೆ. ಕೆಲವರು ಕಾಫಿ ಕುಡಿದರೆ, ಇನ್ನು ಕೆಲವರು ಟೀ ಕುಡಿಯುತ್ತಾರೆ. ಈ ಎರಡು ಪಾನೀಯಗಳನ್ನು ಜನರು ತಮ್ಮತಮ್ಮ ರುಚಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಡಿಯುತ್ತಾರೆ. ಆದರೆ ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಉಪಯೋಗದ ವಿವರ ಇಲ್ಲಿದೆ. ಕಾಫಿಯಲ್ಲಿ ಹಲವಾರು ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹವನ್ನು ಶುದ್ಧೀಕರಣ ಮಾಡುವುದರ ಜತೆಗೆ ಫ್ರೆಶ್ ಆಗಿಸುತ್ತದೆ. ಯಕೃತ್‌ಗೆ ಒಳ್ಳೆಯದು. ವಿಶೇಷವಾಗಿ ಮದ್ಯ ಸೇವಿಸುವವರಿಗೆ ಯಕೃತ್‌ಗೆ ಒಳ್ಳೆಯದು. ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಕಾಫಿ ಕುಡಿಯುವವರು ಅದರ ಸುವಾಸನೆ ಬಂದರೂ ತಮ್ಮ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಸಾಬೀತಾಗಿಲ್ಲ. ಆದರೂ ಪ್ರತಿನಿತ್ಯ ಒಂದು ಕಪ್ ಕಾಫಿ ಕುಡಿದರೆ ಯಾವುದೇ ಅಪಾಯವಿಲ್ಲ. ಮಧುಮೇಹ ಮತ್ತು ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರು ಕಾಫಿ ಕುಡಿದರೆ ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕಾಫಿ ಬಳಕೆಯು ಸುಮಾರು 40% ಜಠರ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾಫಿ ಬಳಕೆ ಸಿರೋಸಿಸ್ ವ್ಯಾಪ್ತಿಯು ಕಡಿಮೆ ಮಾಡಬಹುದು.